ನೆಲಮಂಗಲ ಯೋಜನಾ ಪ್ರಾಧಿಕಾರ
ನೆಲಮಂಗಲ ಯೋಜನಾ ಪ್ರಾಧಿಕಾರ

ನೆಲಮಂಗಲ ಯೋಜನಾ ಪ್ರಾಧಿಕಾರ

ಕರ್ನಾಟಕ ಸರ್ಕಾರ

×
ಅಭಿಪ್ರಾಯ

ಶ್ರೀ ಪಿ ರಾಜೇಂದ್ರ ಚೋಳನ್, ಐಎಎಸ್

ಮಹಾನಗರ ಆಯುಕ್ತರು ಬಿಎಂಆರ್‌ಡಿಎ

ಪರಿಚಯ

ಯೋಜನಾ ಪ್ರಾಧಿಕಾರದ ಚಟುವಟಿಕೆಗಳು: ಸರ್ಕಾರವು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜಜನಾ ಕಾಯ್ದೆ 1961 ರ ಕಲಂ 4-A(1) ರನ್ವಯ ಅಧಿಸೂಚನೆ ಸಂಖ್ಯೆ: ನಅಇ 63 ಟಿಟಿಪಿ 96 ದಿನಾಂಕ: 27.01.1997 ರಲ್ಲಿ ನೆಲಮಂಗಲ ಪಟ್ಟಣ ಒಳಗೊಂಡು ಸ್ಥಳೀಯ ಯೋಜನಾ ಪ್ರದೇಶವನ್ನು ಘೋಷಿಸಿದೆ. ನೆಲಮಂಗಲ ಸ್ಥಳೀಯ ಯೋಜನಾ ಪ್ರದೇಶದಲ್ಲಿ ನೆಲಮಂಗಲ ಕಂದಾಯ ಗ್ರಾಮ ಹಾಗೂ ಪಟ್ಟಣ ಒಳಗೊಂಡು ನೆಲಮಂಗಲ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಓಟ್ಟು 281 ಗ್ರಾಮಗಳಿದ್ದು, ನೆಲಮಂಗಲ ತಾಲ್ಲೋಕಿನಲ್ಲಿ 205 ಗ್ರಾಮ, ಬೆಂಗಳೂರು ಉತ್ತರ ತಾಲ್ಲೋಕಿನಲ್ಲಿ 42 ಗ್ರಾಮ ಮತ್ತು ಮಾಗಡಿ ತಾಲ್ಲೋಕಿನಲ್ಲಿ 34 ಒಳಗೊಂಡಿದ್ದು, ಬೆಂಗಳೂರು ನಗರದ ಪಶ್ಚಿಮ ದಿಕ್ಕಿನಲ್ಲಿ ರಾ.ಹೆ-04 ರ ಸುಮಾರು 25 ಕಿ.ಮೀ ದೂರದಲ್ಲಿದೆ.ಇದು 77 10’ 59.28’’ ರಿಂದ 77 27’ 56.95 ’’ಪೂರ್ವ ರೇಖಾಂಶ ಮತ್ತು 12 58’ 10.98” ರಿಂದ 13 19’ 38.35” ಉತ್ತರ ಅಕ್ಷಾಂಶ ನಡುವೆ ಹರಡಿರುತ್ತದೆ.ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 204 ಟಿಟಿಪಿ 97 ದಿನಾಂಕ: 14-೦7-1997 ರನ್ವಯ ನೆಲಮಂಗಲ ನಗರ ಯೋಜನಾ ಪ್ರಾಧಿಕಾರದ ರಚನೆಯಾಗಿರುತ್ತದೆ. ನಗರ ಯೋಜನಾ ಪ್ರಾಧಿಕಾರ ನೆಲಮಂಗಲ ಕಛೇರಿಯು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ಹಾಗೂ ಕರ್ನಾಟಕ ನಗರ ಯೋಜನಾ ಪ್ರಾಧಿಕಾರ ನಿಯಮಾವಳಿಗಳ 1965 ರಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನೆಲಮಂಗಲ ಯೋಜನಾ ಪ್ರಾಧಿಕಾರ ಕಛೇರಿಯು ದಿನಾಂಕ: 31-08-2001 ರಿಂದ ಕಾರ್ಯನಿರ್ವಹಿಸುತ್ತಿದೆ. ಅಧ್ಯಕ್ಷರು ಪ್ರಾಧಿಕಾರದ ಮುಖ್ಯಸ್ತರಾಗಿದ್ದು ಸರ್ಕಾರದಿಂದ ನೇಮಕಗೊಂಡಿರುತ್ತಾರೆ. ಸದಸ್ಯ ಕಾರ್ಯದರ್ಶಿರವರು ಕಛೇರಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದು ಕಛೇರಿಯ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ಮೂಲ: ನೆಲಮಂಗಲ ಯೋಜನಾ ಪ್ರಾಧಿಕಾರ, ಕರ್ನಾಟಕ ಸರ್ಕಾರ.

ಶ್ರೀ ಪoಡರಿನಾಥ ಜಿ.ರೆಡ್ಡಿ

ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರು

ವಿಭಾಗದ ಪ್ರಮುಖ ವಿಷಯಗಳು

test

ಗ್ಯಾಲರಿ