ನೆಲಮಂಗಲ ಯೋಜನಾ ಪ್ರಾಧಿಕಾರ
ನೆಲಮಂಗಲ ಯೋಜನಾ ಪ್ರಾಧಿಕಾರ

ನೆಲಮಂಗಲ ಯೋಜನಾ ಪ್ರಾಧಿಕಾರ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಕಾರ್ಯವಿಧಾನ

ಕಾರ್ಯವಿಧಾನ

ಕಟ್ಟಡ ನಕ್ಷೆ ಪ್ರಕರಣಗಳಿಗೆ ತಾಂತ್ರಿಕ ಅಭಿಪ್ರಾಯ ನೀಡುವ ಕಾರ್ಯವಿಧಾನ
1.    ತಮ್ಮ ನಿವೇಶನದಲ್ಲಿ ಕಟ್ಟಡ ಕಟ್ಟಲು ಉದ್ದೇಶಿಸಿರುವ ವ್ಯಕ್ತಿಯು ಮೊದಲು ನಿಗಧಿತ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ನಗರಸಭೆ ನೆಲಮಂಗಲ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು.
2.    ಅರ್ಜಿದಾರರ ಅರ್ಜಿ ಮತ್ತು ದಾಖಲೆಗಳನ್ನು ಸ್ಥಳೀಯ ಸಂಸ್ಥೆಯು ಪರಿಶೀಲಿಸಿ ಅದನ್ನು ತಾಂತ್ರಿಕ ಪರಿಶೀಲನೆಗಾಗಿ ನೆಲಮಂಗಲ ಯೋಜನಾ ಪ್ರಾಧಿಕಾರಕ್ಕೆ ಕಳುಹಿಸುತ್ತಿದೆ.
3.    ಅರ್ಜಿದಾರರ ಅರ್ಜಿ ಮತ್ತು ದಾಖಲೆಗಳನ್ನು ಪ್ರಾಧಿಕಾರ ಪರಿಶೀಲಿಸಿದ ನಂತರ ಅಗತ್ಯವಿದ್ದಲ್ಲಿ ಹೆಚ್ಚುವರಿ ಮಾಹಿತಿ ಮತ್ತು ದಾಖಲೆಗಳನ್ನು ಅರ್ಜಿದಾರರು ಪ್ರಾಧಿಕಾರ ಕೋರಿಕೆಯಂತೆ ಸಲ್ಲಿಸಬೇಕು.
4.    ಅರ್ಜಿದಾರರಿಂದ ಸ್ವೀಕರಿಸಿದ ಎಲ್ಲಾ ಮಾಹಿತಿ ಮತ್ತು ದಾಖಲೆಗಳನ್ನು ಮಹಾ ಯೋಜನೆ ಮತ್ತು ವಲಯ ನಿಯಮಾವಳಿಗಳ ಪ್ರಕಾರ ಪರಿಶೀಲಿಸಿ ನಿಗಧಿಪಡಿಸಿದ ಶುಲ್ಕ ತುಂಬಿಸಿಕೊಂಡು ಪ್ರಾಧಿಕಾರವು ತಮ್ಮ ತಾಂತ್ರಿಕ ಅಭಿಪ್ರಾಯವನ್ನು ಪ್ರಾರಂಭಿಕ ಪ್ರಮಾಣ ಪತ್ರ ನೀಡುತ್ತಿದೆ.
5.    ನೆಲಮಂಗಲ ನಗರ ಸಭೆಯು ಕಟ್ಟಡ ಕಟ್ಟಲು ಪ್ರಾರಂಭಿಕ ಪ್ರಮಾಣ ಪತ್ರವನ್ನು ನಿಗಧಿಪಡಿಸಿದ ಶುಲ್ಕ ತುಂಬಿಸಿಕೊಂಡು ಮತ್ತು ನಿಬಂಧನೆಗೊಳಪಟ್ಟು ನೀಡುತ್ತಿದೆ.

ಅಭಿವೃದ್ಧಿ ನಕ್ಷೆ/ಗುಂಪು ಮನೆಗಳು/ಬಹು ಮಹಡಿಗಳ ಕಟ್ಟಡ ನಕ್ಷೆಗೆ ಅನುಮೋದನೆ ನೀಡಲು ಸಲ್ಲಿಸಬೇಕಾದ ದಾಖಲಾತಿಗಳ ಪಟ್ಟಿ

1.    ಕ್ರಯಪತ್ರ (ಖರೀದಿ ಪತ್ರ/ಪಾರ್ಟಿಶನ್ ಡೀಡ್ ಇತ್ತೀಚಿನ ಎನಕಂಬರನ್ಸ್ (ಇಅ) ನಮೂನೆ-15 ಮತ್ತು 16,
2.    ಇತ್ತೀಚಿನ ಪಹಣಿ ಪತ್ರಿಕೆ (R.T.C) ಹಕ್ಕು ಬದಲಾವಣೆ ಪ್ರತಿ/ಖಾತಾ ಪ್ರಮಾಣ ಪತ್ರ ಹಾಗೂ ಭೂಸ್ವಾಧೀನ ವಿವರಗಳು (ಇದ್ದಲ್ಲಿ ಮಾತ್ರ),
3.    ಮೂಲ ಪಿ.ಟಿ.ಶೀಟ್ ಪ್ರತಿ (ಸುತ್ತಳತೆ ನಮೂದಿಸಿದ್ದು) ಗ್ರಾಮ ನಕ್ಷೆ, ಸಂಬಂಧಪಟ್ಟ ಕಛೇರಿಯಿಂದ ನೀಡಿದ ಆಕಾರಬಂದ ಧೃಡಿಕೃತ ಪ್ರತಿ,
4.    ಪ್ರಸ್ತಾವಿತ ಜಮೀನಿನ ಅಂಚಿನಿಂದ 100 ಮೀ. ಒಳಗಡೆ ಬರುವ ಜಮೀನಿನ ಅಭಿವೃದ್ಧಿಗಳ ಮಾಹಿತಿ ಒಳಗೊಂಡಿರುವ ಮತ್ತು ಅಳತೆ 1:100 ಗೆ ಟೋಟಲ್ ಸ್ಟೇಶೇನ್ದಿಂ ದ ತಯಾಸಿರುವ ಸ್ಥಳ ನಕ್ಷೆ ಪ್ರತಿ,
5.    ಹಾಲಿ ರಸ್ತೆ ಸಂಪರ್ಕ ವಿವರಗಳು (ಉದಾಹರಣೆಗಾಗಿ ರಸ್ತೆ ಅಗಲ ಹಾಗೂ ರಸ್ತೆ ವರ್ಗಿಕರಣ ಇತ್ಯಾದಿ)
6.    ಅಭಿವೃದ್ಧಿ ನಕ್ಷೆ/ಕಟ್ಟಡ ನಕ್ಷೆಗಳನ್ನು 1:500 ಕ್ಕಿಂತ ಕಡಿಮೆ ಅಳತೆಗೆ ತಯಾರಿಸಿದ್ದು ಇರಬಾರದು.
•    ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಮಾನ ನಿಲ್ದಾಣ ಪ್ರಾಧಿಕಾರ, ಅಗ್ನಿ ಶಾಮಕ ದಳ ಇಲಾಖೆ, ದೂರವಾಣಿ ಇಲಾಖೆ, ಸಂಬಂಧಪಟ್ಟ ವಿದ್ಯುತ್ ಇಲಾಖೆ, ಕರ್ನಾಟಕ ನಗರ ನೀರಾವರಿ ಸರಬರಾಜು ಹಾಗೂ ಒಳ ಚರಂಡಿ ನಿಗಮ ರವರ ನಿರಾಕ್ಷೇಪಣಾ ಪ್ರಮಾಣ ಪತ್ರ.

ಮೂಲ: ನೆಲಮಂಗಲ ಯೋಜನಾ ಪ್ರಾಧಿಕಾರ, ಕರ್ನಾಟಕ ಸರ್ಕಾರ.