ನೆಲಮಂಗಲ ಯೋಜನಾ ಪ್ರಾಧಿಕಾರ
ನೆಲಮಂಗಲ ಯೋಜನಾ ಪ್ರಾಧಿಕಾರ

ನೆಲಮಂಗಲ ಯೋಜನಾ ಪ್ರಾಧಿಕಾರ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ವಿನ್ಯಾಸ ಅನುಮೋದನೆ ಕಾರ್ಯವಿಧಾನ

     ವಿನ್ಯಾಸ ಅನುಮೋದನೆ/ಉಪವಿಭಜನೆಯ ವಿಧಾನ
1.
ಅರ್ಜಿದಾರರು ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಂಬಂಧಪಟ್ಟ ಜಿಲ್ಲೆಯ ಯೋಜನಾ ಪ್ರಾಧಿಕಾರಕ್ಕೆ ವಿನ್ಯಾಸದ ಅನುಮೋದನೆಗಾಗಿ ಸಲ್ಲಿಸಬೇಕು.
2.   
ದಾಖಲೆಗಳನ್ನು ಪರಿಶೀಲಿಸಿದ ನಂತರ, ಅಗತ್ಯ ಮಾಹಿತಿ/ದಾಖಲೆಗಳ ಅಗತ್ಯತೆಯಿದ್ದಲ್ಲಿ ಅರ್ಜಿದಾರರು ಯೋಜನಾ ಪ್ರಾಧಿಕಾರಕ್ಕೆ ಸಲ್ಲಿಸಬೇಕು.
3.   
ದಾಖಲೆಗಳನ್ನು ಪರಿಶೀಲಿಸಿದ ನಂತರ ಸದರಿ ವಿಷಯವನ್ನು ಆಡಳಿತಾತ್ಮಕ ಮಂಜೂರಾತಿಗಾಗಿ ಪ್ರಾಧಿಕಾರದ ಸಭೆಯಲ್ಲಿ ಮಂಡಿಸಬೇಕು.
4.   
ಸಭೆಯ ಆಡಳಿತಾತ್ಮಕ ಮಂಜೂರಾತಿ ಪಡೆದ ನಂತರ ಅರ್ಜಿದಾರರು ನಿಗಧಿತ ಶುಲ್ಕ ಪಾವತಿಸಿದ ನಂತರ ಪ್ರಾದಿಕಾರವು ಕೆಲವೊಂದು ಷರತ್ತುಗಳೊಂದಿಗೆ ಹಾಗೂ    ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ- 1961   ಕಲo 17  ಅಡಿಯಲ್ಲಿ ಪ್ರಾಧಿಕಾರದಿಂದ ವಿನ್ಯಾಸಕ್ಕೆ ತಾಂತ್ರಿಕ ಅನುಮೋದನೆ ನೀಡಲಾಗುತ್ತದೆ.
5.   
ಉಪವಿಭಜನೆನಕ್ಷೆಗೆ ಮಾರ್ಪಾಡು/ಪರಿಷ್ಕರಣೆ ಅಗತ್ಯವಿದ್ದಲಿ, ಅರ್ಜಿದಾರರು ಅಂತಹ ಮಾರ್ಪಾಡು/ಪರಿಷ್ಕರಣೆಯೊಂದಿಗೆ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.


ವಿನ್ಯಾಸ ಅನುಮೋದನೆಗೆ ಸಲ್ಲಿಸಬೇಕಾದ ದಾಖಲೆಗಳ ಪಟ್ಟಿ
1.   
ಕ್ರಯ ಪತ್ರ, ಸಾಲು ವಿಭಾಗಪತ್ರ
2.   
ಇತೀಚಿನ ಇಸಿ ನಮೂನೆ-15ಮತ್ತು16.
3.   
ಇತ್ತೀಚಿನ ಆರ್.ಟಿ.ಸಿ (ಪಹಣಿ), ಮ್ಯುಟೇಶನ್ ಪ್ರತಿ, ಪ್ರಸ್ತಾಪಿತ ಜಮೀನಿನ ಖಾತಾ ಪ್ರತಿ, (ಯಾವುದಾದರೂ ಇದ್ದಲ್ಲಿ)
4.   
ಎಲ್ಲಾ ಬದಿಗಳ ಅಳತೆಗಳುಳ್ಳ ಭೂದಾಖಲೆಗಳ ಸಹಾಯಕ ನಿರ್ದೇಶಕರ ದೃಢೀಕೃತ ಮೂಲ ಸರ್ವೆಸ್ಕೆಚ್, (ಜಮೀನಿನ ಗ್ರಾಮ ನಕ್ಷೆ-ಸಂಬಂಧಿಸಿ ಪ್ರಾಧಿಕಾರದಿಂದ ದೃಢೀಕರಿಸಿದ್ದು)
5.   
ಪ್ರಶ್ನಿತ ಜಮೀನಿನ ಅಂಚಿನಿಂದ 200 ಮೀ. ವರೆಗಿನ ವಿವರಗಳನ್ನು ತೋರಿಸುವ ಟೋಟಲ್ ಸ್ಟೇಷನ್ ವಿಧಾನದಿಂದ ತಯಾರಿಸಲಾದ ಸ್ಥಳ ನಕ್ಷೆ.
6.   
ಸಂಪರ್ಕ ರಸ್ತೆ ಬಗ್ಗೆ ದಾಖಲೆ, ರಸ್ತೆ ವರ್ಗ, ಅಗಲ ಇತ್ಯಾದಿ.
7.   
ಕಂದಾಯ ಇಲಾಖೆಯಿಂದ ಹೊರಡಿಸಲಾದ ಧೃಢೀಕೃತ ಭೂ-ಪರಿವರ್ತನೆ ಆದೇಶ.
8.   
ಅನುಮೋದಿತ ವಲಯ ನಿಯಮಾವಳಿಗಳ ಕರಡು ಪ್ರತಿ.
9.   
ಜಮೀನಿನ ವಿಸ್ತೀರ್ಣವು 10.0 ಎಕರೆಗೆ ಮೇಲ್ಪಟ್ಟಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯ ನಿರಾಕ್ಷೇಪಣಾ ಪತ್ರ.

 

ಮೂಲ:ನೆಲಮಂಗಲ  ಯೋಜನಾ ಪ್ರಾಧಿಕಾರ, ಕರ್ನಾಟಕ ಸರ್ಕಾರ.