ನೆಲಮಂಗಲ ಯೋಜನಾ ಪ್ರಾಧಿಕಾರ
ನೆಲಮಂಗಲ ಯೋಜನಾ ಪ್ರಾಧಿಕಾರ

ನೆಲಮಂಗಲ ಯೋಜನಾ ಪ್ರಾಧಿಕಾರ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಯೋಜನಾ ಪ್ರಾಧಿಕಾರ ಕಾರ್ಯಗಳು
ಯೋಜನಾ ಪ್ರಾಧಿಕಾರ ಕಾರ್ಯಗಳು

ಕಾರ್ಯ ವಿಧಾನ ಹಾಗೂ ಕಛೇರಿಯ ಕಾರ್ಯನಿರ್ವಾಹಣಾ ವಿಧಾನಗಳು:

  1. ಮಹಾಯೋಜನೆ ತಯಾರಿಕೆ: ಯೋಜನಾ ಪ್ರಾಧಿಕಾರದ ವ್ಯಾಪ್ತಿಯೊಳಗೆ ಬರುವ ಪಟ್ಟಣ ಮತ್ತು ಅಭಿವೃದ್ಧಿ ಪಥದಲ್ಲಿ ಇರುವ ಗ್ರಾಮಗಳ ಭೌತಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಿ ಮಹಾಯೋಜನೆ ಸಿದ್ದಪಡಿಸುವುದು ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯಂತೆ ಈ ಯೋಜನೆಗಳನ್ನು ಸರ್ಕಾರಕ್ಕೆ ಸಲ್ಲಿಸಿ ಅಂಗೀಕಾರ ಪಡೆಯುವುದು.
  2. ಪಟ್ಟಣ ಮತ್ತು ಗ್ರಾಮ ವಿಸ್ತರಣಾ (ಬಡಾವಣೆ) ಯೋಜನೆ ಅಭಿವೃದ್ಧಿ ಸುಧಾರಣಾ ಯೋಜನೆಗಳು ಮತ್ತಿತರ ಪ್ರಗತಿ ಪೂರ್ವಕವಾದ ಯೋಜನೆಗಳನ್ನು ತಯಾರಿಸುವುದು.
  3. ಕರ್ನಾಟಕ ನಗರ ಮತ್ತು ಗ್ರಾಮಾಂತರ ಕಾಯ್ದೆಯಡಿಯಲ್ಲಿ ಸಂಬಂಧಿಸಿದ ಇಲಾಖೆ ಮತ್ತು ಸಂಸ್ಥೆಗಳಿಗೆ ತಾಂತ್ರಿಕವಾದ ನೆರವು ಮತ್ತು ಅನುಮೋದನೆಗಳನ್ನು ನೀಡುವುದು.
  4. ವ್ಯವಸಾಯ ಭೂಮಿಯನ್ನು ವ್ಯವಸಾಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತಿಸುವ ಮೊದಲು ಕಂದಾಯ ಇಲಾಖೆಗೆ ತಾಂತ್ರಿಕ ಅಭಿಪ್ರಾಯ ನೀಡುವುದು.

ಕಛೇರಿಯ ಕಾರ್ಯನಿರ್ವಹಣೆ:

  1. ಪ್ರಾಧಿಕಾರವು ಕೆ.ಟಿ.ಸಿ.ಪಿ. ಕಾಯ್ದೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಸದರಿ ಕಾಯ್ದೆಯಂತೆ ಯೋಜನಾ ಪ್ರದೇಶಗಳಲ್ಲಿ ಬರುವ ಜಾಗಗಳಿಗೆ ನಿಯಮಗಳ ಪ್ರಕಾರ ಅಂದರೆ ಭೂ ಪರಿವರ್ತನೆಗಾಗಿ ತಾಂತ್ರಿಕ ಅಭಿಪ್ರಾಯ ನೀಡುವುದು, ವಿನ್ಯಾಸ ಅನುಮೋದನೆ ಮತ್ತು ಕಟ್ಟಡವನ್ನು ಕಟ್ಟಲು ಪ್ರಾರಂಭಿಕ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಇದಲ್ಲದೇ ಅನಧಿಕೃತ ಅಭಿವೃದ್ಧಿಗಳನ್ನು ಸಹ ನಿಯಂತ್ರಿಸಲು ಕ್ರಮಕೈಗೊಳ್ಳಲಾಗಿರುತ್ತದೆ.

ಮೂಲ: ನೆಲಮಂಗಲ ಯೋಜನಾ ಪ್ರಾಧಿಕಾರ, ಕರ್ನಾಟಕ ಸರ್ಕಾರ.